ಅಕೇಸಿಯಾ ಪೈಕ್ನಂತಾ (Acacia pycnantha)ಎಂದು ವೈಜ್ಞಾನಿಕ ಹೆಸರು ಹೊತ್ತಿರುವ ಬಂಗಾರ ಬಣ್ಣದ ವಾಟ್ಟಲ್ ಅಧಿಕೃತವಾಗಿ ಆಸ್ಟ್ರೇಲಿಯದ ರಾಷ್ಟ್ರೀಯ ಹೂವಿನ ಗಿಡ ಎಂದು ಅಂಗೀಕರಿಸಲ್ಪಟ್ಟಿದೆ. ವಾಟ್ಟಲ್ ಗಿಡಗಳು ಜಗತ್ತಿನ ಹಲವೆಡೆ ಬೆಳೆದರೂ ಆಷ್ಟ್ರೇಲಿಯಾದಲ್ಲಿ ಸಿಗುವಷ್ಟು ಬೇರೆ ಬೇರೆ ಪ್ರಭೇದಗಳು ಬೇರೆಲ್ಲೂ ಇಲ್ಲ ಅನಿಸುತ್ತದೆ. ದಿನಕ್ಕೆ ಮೂರು ತರನಾದ ವಾಟ್ಟಲ್ ಗಿಡಗಳಂತೆ ವರ್ಷಪೂರ್ತಿ ನೆಟ್ಟರೂ ಇಲ್ಲಿ ಸಿಗುವ ಎಲ್ಲಾ ತರನಾದ ವಾಟ್ಟಲ್‌ಗಳನ್ನು ನೆಡುವದಾಗುವದಿಲ್ಲ ಎನ್ನುವ ಮಾತು ಆಸ್ಟ್ರೇಲಿಯದಲ್ಲಿ ಚಲಾವಣೆಯಲ್ಲಿದೆ
.
![]() |
ಬಂಗಾರ ಬಣ್ಣದ ವಾಟ್ಟಲ್ ಗಿಡ. ಕನ್ನಡದಲ್ಲಿ ಇದನ್ನು ಬಹುಶಃ ಸಂಕೇಶ್ವರ ಗಿಡ ಎಂದು ಕರೆಯುತ್ತಾರೆ. |
ಬಂಗಾರ ಬಣ್ಣದ ವಾಟ್ಟಲ್ ಗಿಡದಲ್ಲಿರುವ
ಹಸಿರೆಲೆಗಳು ಮತ್ತು ಮೊಗ್ಗಿನಂತಹ ಹಳದಿ ಹೂವುಗಳು ತಮ್ಮ ಅತಿ ವಿಶಿಷ್ಟ ಬಣ್ಣಗಳಿಂದ ಕಣ್ಮನ ಸೆಳೆಯುತ್ತವೆ.
ಈ ಹೂವಿನ ಗಿಡವನ್ನು ಆಸ್ಟ್ರೇಲಿಯದ ರಾಷ್ಟ್ರೀಯ ಲಾಂಛನ- ಕೋಟ್ ಆಫ್ ಆರ್ಮ್ಸ್‌ದಲ್ಲಿ ಬಳಸಲಾಗಿದೆ.
ಅಷ್ಟೇ ಅಲ್ಲದೇ ಬಂಗಾರ ಬಣ್ಣದ ವಾಟ್ಟಲ್ ಇರುವ ಅಂಚೆ ಚೀಟಿಯನ್ನೂ ಸರಕಾರ ಬಿಡುಗಡೆ ಮಾಡಿದೆ.
ಆಷ್ಟ್ರೇಲಿಯಾದ ಹಲವು ಊರುಗಳಲ್ಲಿವ ಓಣಿಗಳ
ಹೆಸರುಗಳನ್ನು ವಾಟ್ಟಲ್ ಸ್ಟ್ರೀಟ್ ಅಂತ ಕರೆದು ಆಯಾ
ಊರುಗಳ ಸ್ಥಳೀಯ ಆಡಳಿತ ಈ ರಾಷ್ಟ್ರೀಯ ಹೂವಿನ ಗಿಡಕ್ಕೆ
ಗೌರವ ಸೂಚಿಸಿವೆ.

ಕ್ವೀನ್ಸ್ ಲ್ಯಾಂಡ್ ರಾಜ್ಯದ ಮಕಾಯ್ ಊರಿನಲ್ಲಿರುವ ಓಣಿಯ ನಾಮಪಕಲಕ
೧೯೮೮ ಸೆಪ್ಟೆಂಬರ್ ೧ರಂದು ಬಂಗಾರ ಬಣ್ಣದ ವಾಟ್ಟಲ್‌ನ್ನು ರಾಷ್ಟ್ರೀಯ ಹೂವಿನ ಗಿಡ ಎಂದು ಘೋಷಿಸಿದ ಸವಿ ನೆನಪಿಗಾಗಿ ಆ ದಿನವನ್ನು ವಾಟ್ಟಲ್ ದಿನವೆಂದು ಆಚರಿಸಲಾಗುತ್ತದೆ.