ಕ್ಷೀರಸ್ಪಟಿಕ ಎಂದು ಕರೆಯಲ್ಪಡುವ ಓಪಲ್ ಆಭರಣದ ಹರಳುಗಳಿಗೆ ಆಸ್ಟ್ರೇಲಿಯಾ ತುಂಬ ಪ್ರಸಿದ್ಧ. ಜಗತ್ತಿನ ಒಟ್ಟು ಓಪಲ್ ಹರಳುಗಳ ಉತ್ಪಾದನೆಯ ೯೭ ಪ್ರತಿಶತ ಉತ್ಪಾದನೆಯನ್ನು ಆಸ್ಟ್ರೇಲಿಯಾದಲ್ಲಿಯೇ ಮಾಡಲಾಗುತ್ತದೆ. ಆಸ್ಟ್ರೇಲಿಯಾದ ನಡು ಭಾಗದಲ್ಲಿರುವ ದೊಡ್ಡ ಬಂಜರು ಮರುಭೂಮಿಯಲ್ಲಿ ಈ ಹರಳುಗಳು ಹೇರಳವಾಗಿ ಸಿಗುತ್ತವೆ. ನ್ಯೂಸೌಥ್ ವೇಲ್ಸ್ ನ ಲೈಟಿಂಗ್ ರಿಡ್ಜ್ ,ಸೌಥ್ ಆಸ್ಟ್ರೇಲಿಯಾದ ಕೂಬರ್ ಪ್ಯಾಡಿ, ಅಂಡಮೂಕ ಮತ್ತು ಕ್ವೀನ್ಸಲ್ಯಾಂಡ್ ನ ಕ್ವಿಲ್ಪಿ ಈ ಕ್ಷೀರಸ್ಪಟಿಕದ ಗಣಿಗಾರಿಕೆಗೆ ಪ್ರಸಿದ್ಧವಾಗಿವೆ. ಅದರಲ್ಲಿಯೂ ಸೌಥ್ ಆಸ್ಟ್ರೇಲಿಯಾವನ್ನು ಜಗತ್ತಿನ ಓಪಲ್ ಹರಳುಗಳ ತೊಟ್ಟಿಲು ಎಂದು ಕರೆಯಬಹುದಾಗಿದ್ದು, ಜಗತ್ತಿನ ಒಟ್ಟು ಹರಳುಗಳ ೮೦% ಇಲ್ಲಿಯೇ ಸಿಗುತ್ತವೆ.
ವಾರ್ಷಿಕ ೪೭ ಮಿಲಿಯನ್ ಡಾಲರದ(೨೦೦೭-೦೮ರ ಅಂದಾಜಿನಂತೆ) ವ್ಯವಹಾರವಾಗಿರುವ ಈ ಓಪಲ್ ಉತ್ಪಾದನೆಗಾಗಿ ಆಷ್ಟ್ರೇಲಿಯ ಬಹಳ ಪ್ರಸಿದ್ಧವಾಗಿದೆ.
ಈ ಓಪಲ್ ಹರಳುಗಳು ಎಲ್ಲ ಮಿಶ್ರ ಬಣ್ಣಗಳಲ್ಲಿ ಸಿಗುತ್ತವೆ ಅದರಲ್ಲಿಯೂ ಪ್ರಮುಖವಾಗಿ ನೀಲಿ, ಕಪ್ಪು ಮತ್ತು ಬಂಗಾರ ಬಣ್ಣದ ಓಪಲಗಳು ಪ್ರಸಿದ್ಧವಾಗಿವೆ. ರಾಸಾಯನಿಕವಾಗಿ ಹೈಡ್ರಸ್ ಸಿಲಿಕಾನ್ ಡಯೊಕ್ಸೈಡ್ (SiO2.nH2O) ಎಂಬ ಸಂಯುಕ್ತವಾಗಿರುವ ಓಪಲ್ ಹರಳುಗಳು ತಮ್ಮ ಸಂರಚನೆಯಲ್ಲಿ ನೀರಿನ ಅಂಶವನ್ನು ಹೊಂದಿರುವದರಿಂದ ಸ್ವಲ್ಪ ಮೃದುವಾಗಿರುತ್ತವೆ.
೧೯೭೪ರಲ್ಲಿ ಸಿಂಥೆಟಿಕ( ಕೃತಕ ) ಓಪಲ್ ಹರಳುಗಳನ್ನು ಕಂಡುಹಿಡಿಯಲಾಯಿತಾದರೂ ಈ ಕೃತಕ ಹರಳುಗಳು ಯಾವದೇ ವಿಧದಲ್ಲಿಯೂ ನೈಸರ್ಗಿಕ ಹರಳುಗಳನ್ನು ಸರಿಗಟ್ಟಲಾರವು.
೧೯೭೪ರಲ್ಲಿ ಸಿಂಥೆಟಿಕ( ಕೃತಕ ) ಓಪಲ್ ಹರಳುಗಳನ್ನು ಕಂಡುಹಿಡಿಯಲಾಯಿತಾದರೂ ಈ ಕೃತಕ ಹರಳುಗಳು ಯಾವದೇ ವಿಧದಲ್ಲಿಯೂ ನೈಸರ್ಗಿಕ ಹರಳುಗಳನ್ನು ಸರಿಗಟ್ಟಲಾರವು.
೧೯೫೬ರಲ್ಲಿ ಕೂಬರ್ ಪ್ಯಾಡಿ ಯಲ್ಲಿ ಸಿಕ್ಕ 'ಒಲಂಪಿಕ್ ಒಪಲ್' ಮತ್ತು ೧೯೫೪ರಲ್ಲಿ ಎಲಿಜೆಬೆತ್ ರಾಣಿಗೆ ಉಡುಗೊರೆಯಾಗಿ ಕೊಡಲ್ಪಟ್ಟ ಅಂಡಮೂಕದಲ್ಲಿ ಸಿಕ್ಕ ಅಂಡಮೂಕ ಎನ್ನುವ ಓಪಲ್ ಹರಳುಗಳು ಬಹಳ ಪ್ರಸಿದ್ಧ.
ಓಪಲ ಹರಳುಗಳ ಬಗ್ಗೆ ಇಲ್ಲಿಯ ಮೂಲನಿವಾಸಿಗಳಲ್ಲಿ ಹಲವು ನಂಬಿಕೆಗಳಿದ್ದು, ಒಂದು ನಂಬಿಕೆಯ ಪ್ರಕಾರ ಶಾಂತಿ ಸಂದೇಶವನ್ನು ಸಾರಲು ಕಾಮನಬಿಲ್ಲಿನ ಮೂಲಕ ಭೂಮಿಗೆ ಬಂದ ಭಗವಂತನ ಹೆಜ್ಜೆಗುರುತುಗಳೇ ಈ ಕಲ್ಲುಗಳು. ಅದಕಾಗಿಯೇ ಭೂಮಿಯಲ್ಲಿರುವ ಈ ಕಲ್ಲುಗಳು ಹೊಳೆಯುತ್ತವೆ ಎಂದು ನಂಬಲಾಗಿದೆ.
ಹಾಗೆ ನೋಡಿದರೆ ಓಪಲ್ ಅನ್ನುವ ಇಂಗ್ಲಿಷ ಪದ ಕೂಡ ಸಂಸ್ಕೃತದ ಉಪಾಲಾ ಎನ್ನವ ಪದದ ತದ್ಭವ. ಹೀಗಾಗಿ ಈ ಓಪಲ್ ಹರಳುಗಳನ್ನು ಭಾರತದವರೇ ಮೊದಲು ಉಪಯೋಗಿಸಲು ಪ್ರಾರಂಭಿಸಿರಬಹುದು ಅಂತೆಯೂ ಹೇಳಬಹುದಾಗಿದೆ.
೧೯೯೧೩ ಜುಲೈ ೨೮ರಂದು ಆಷ್ಟ್ರೇಲಿಯ ಓಪಲ್ ಹರಳುಗಳನ್ನು ರಾಷ್ಟ್ರೀಯ ಹರಳುಗಳೆಂದು ಘೋಶಿಸಿತು.
೧೯೯೧೩ ಜುಲೈ ೨೮ರಂದು ಆಷ್ಟ್ರೇಲಿಯ ಓಪಲ್ ಹರಳುಗಳನ್ನು ರಾಷ್ಟ್ರೀಯ ಹರಳುಗಳೆಂದು ಘೋಶಿಸಿತು.
ಇನ್ನಿತರ ಹರಳುಗಳ ಬಗ್ಗೆ ಹೆಚ್ಚಿನ ಮಾಹಿತಿ
ಆಭರಣಗಳ ತಯಾರಿಕೆಯಲ್ಲಿ ಉಪಯೋಗಿಸಲ್ಪಡುವ ವಿವಿಧ ತರಹದ ಅಮೂಲ್ಯ ಹರಳುಗಳು ಬೇರೆ ಬೇರೆ ಖನಿಜಗಳಿಂದಾಗಿದ್ದು, ಭೂಮಿಯಲ್ಲಿ ನೈಸರ್ಗಿಕವಾಗಿ ದೊರೆಯುತ್ತವೆ. ಅವುಗಳನ್ನು ವಿವಿಧ ಆಕಾರ ಮತ್ತು ಗಾತ್ರಗಳಲ್ಲಿ ಕತ್ತರಿಸಿ, ಅವುಗಳ ಮೇಲ್ಮೈಯನ್ನು ನುಣುಪಾಗಿಸಿ ,ಮೆರಗು ಕೊಟ್ಟು ಆಭರಣಗಳಲ್ಲಿ ಉಪಯೋಗಿಸಲಾಗುತ್ತದೆ.
ಇವುಗಳಲ್ಲಿ ಮುಖ್ಯವಾಗಿ ಐದು ತರ.
೧. ವಜ್ರ
೨. ಮಾಣಿಕ್ಯ
೩. ನೀಲ ಮಣಿ
೪. ಪಚ್ಚೆ
೫. ಕ್ಷೀರಸ್ಪಟಿಕ (ಓಪಲ್ )ಹರಳು.