ಅಡ್ವಾನ್ಸ್ ಆಸ್ಟ್ರೇಲಿಯ ಫೇರ್ ಇದು ಆಸ್ಟ್ರೇಲಿಯಾದ ರಾಷ್ಟ್ರ ಗೀತೆ. ಇದು ಪೀಟರ್ ಡೋಡ್ಸ್ ಮ್ಯಾಕ್ ಕೊರ್ಮಿಕ್ ಎನ್ನುವವರಿಂದ ರಚಿಸಲ್ಪಟ್ಟಿದ್ದು ಇದನ್ನು ೧೯೮೪ ರಲ್ಲಿ ಆಸ್ಟ್ರೇಲಿಯಾದ ರಾಷ್ಟ್ರ ಗೀತೆಯಾಗಿ ಅಂಗೀಕರಿಸಲಾಯಿತು.
ಅಡ್ವಾನ್ಸ್ ಆಸ್ಟ್ರೇಲಿಯ ಫೇರ್‌ನ್ನು ಪೀಟರ್ ಡೋಡ್ಸ್ ಮ್ಯಾಕ್ ಕೊರ್ಮಿಕ್ ಅವರು ನಿಖರವಾಗಿ ಯಾವಾಗ ಬರೆದಿದ್ದು ಎಂದು ಗೊತ್ತಿಲ್ಲವಾದರೂ ಅದನ್ನು ಮೊದಲು ಹಾಡಿದ್ದು ೧೮೭೮ರಲ್ಲಿ ಸಿಡ್ನಿಯ ಒಂದು ಕಾರ್ಯಕ್ರಮದಲ್ಲಿ. ಅವಾಗಿನಿಂದ ಎಲ್ಲ ಆಸಿಗಳ ಮನಸೂರೆಗೊಂಡ ಈ ಗೀತೆಗೆ ರಾಷ್ಟ್ರ ಗೀತೆ ಎಂದು ಕರೆಯಿಸಿಕೊಳ್ಳಲು ಬರೊಬ್ಬರಿ ೧೦೬ ವರ್ಷ ಕಾಯಬೇಕಾಯಿತು.
ಇದಕ್ಕಿಂತ ಮೊದಲು ’ಗಾಡ್ ಸೇವ್ ಕ್ವೀನ್’ ಇದು ಆಸ್ಟ್ರೇಲಿಯಾದ ರಾಷ್ಟ್ರ ಗೀತೆಯಾಗಿತ್ತು. ಹಾಗೆ ನೋಡಿದರೆ ’ಗಾಡ್ ಸೇವ್ ಕ್ವೀನ್’ ನಿಜವಾಗಿಯೂ ಬ್ರಿಟೀಶರ ರಾಷ್ಟ್ರ ಗೀತೆ. ಇದನ್ನು ಬ್ರಿಟೀಶರಷ್ಟೇ ಅಲ್ಲದೇ ಅವರ ಆಳ್ವಿಕೆಯಲ್ಲಿದ್ದ ಬಹಳ ರಾಷ್ಟ್ರಗಳು ಬ್ರಿಟೀಶ ಅಧಿಪತ್ಯದಿಂದ ಹೊರಬಂದರೂ ತಮ್ಮ ರಾಷ್ಟ್ರ ಗೀತೆಯಾಗಿ ಇನ್ನೂ ಉಪಯೋಗಿಸುತ್ತಿವೆ. ನ್ಯೂಜಿಲ್ಯಾಂಡ್, ಕೆನಡಾ, ಜಮೈಕಾ, ಬಾರ್ಬಡೋಸ್, ರೊಡೇಸಿಯಾ ಈ ದೇಶಗಳು ’ಗಾಡ್ ಸೇವ್ ಕ್ವೀನ್’ನ್ನೇ ರಾಷ್ಟ್ರ ಗೀತೆಯಾಗಿ ಒಪ್ಪಿಕೊಂಡಂತಹ ಇನ್ನುಳಿದ ದೇಶಗಳು.
ಆಸ್ಟ್ರೇಲಿಯಾ ೧೯೦೦ ರಲ್ಲಿ ಬ್ರಿಟಿಷ್ ಅಧಿಪತ್ಯದಿಂದ ಬಹಳ ಮಟ್ಟಿಗೆ ಹೊರಬಂದರೂ ತನ್ನದೇ ಆದ ರಾಷ್ಟ್ರಗೀತೆಯನ್ನು ಹೊಂದಿರಲಿಲ್ಲ. ಆದರೆ ಮೊತ್ತಮೊದಲು ರಾಷ್ಟ್ರಗೀತೆಯನ್ನು ಹೊಂದಬೇಕೆಂಬ ಪ್ರಯತ್ನ ನಡೆದದ್ದು ೧೯೫೧ ರಲ್ಲಿ. ಆವಾಗ ಹೊಸ ರಾಷ್ಟ್ರಗೀತೆಯನ್ನು ರಚಿಸುವ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಅದರಲ್ಲಿ ಹೆನ್ರಿ ಕ್ರಿಪ್ಸ್ ಎನ್ನುವವರು ಬರೆದ 'ದಿಸ್ ಲ್ಯಾಂಡ್ ಇಜ್ ಮೈನ್' ಎನ್ನುವ ಗೀತೆ ಸ್ಪರ್ಧೆಯನ್ನು ಗೆದ್ದರೂ ರಾಷ್ಟ್ರಗೀತೆಯಾಗಿ ಅಂಗೀಕರಿಸಲಾಗಲಿಲ್ಲ. ಇದೇ ತರಹದ ಎರಡನೆಯ ಪ್ರಯತ್ನವನ್ನು ೧೯೭೪ ರಲ್ಲಿ ಮಾಡಲಾಯಿತಾದರೂ ಯಾವುದೇ ಗೀತೆಯನ್ನು ರಾಷ್ಟ್ರಗೀತೆಯಾಗಿ ಅಂಗೀಕರಿಸಲಾಗಲಿಲ್ಲ. ಬಹಳ ಜನರ ಅಭಿಪ್ರಾಯ ಅಡ್ವಾನ್ಸ್ ಆಸ್ಟ್ರೇಲಿಯ ಫೇರ್ ಇದನ್ನೆ ರಾಷ್ಟ್ರಗೀತೆಯನ್ನಾಗಿ ಅಂಗೀಕರಿಸಬೇಕು ಎನ್ನುವುದಾಗಿತ್ತಾದರೂ ಇದಕ್ಕೆ ರಾಜಕೀಯ ಇಚ್ಚಾ ಶಕ್ತಿಯ ಕೊರತೆಯೇ ಕಾರಣ ಎನಿಸುತ್ತದೆ. ಆವಾಗಿನ ಬಹಳಷ್ಟು ನಾಯಕರು ಬ್ರಿಟೀಶ್ ಮೂಲದವರಾಗಿದ್ದು ತಮ್ಮ ಮೂಲದೇಶದ ರಾಜಸತ್ತೆಗೆ ಬದ್ದರಾಗಿದ್ದರು ಎನಿಸುತ್ತದೆ.ಅಷ್ಟೇ ಅಲ್ಲದೇ ಆಸ್ಟ್ರೇಲಿಯಾ ಒಂದು ಹಂತದ ಸ್ವಾತಂತ್ರ್ಯ ಗಳಿಸಿದರೂ ಬ್ರಿಟಿಷ್ ಅಧಿಪತ್ಯದಿಂದ ಪೂರ್ತಿಯಾಗಿ ಹೊರಬಂದಿಲ್ಲದೇ(ಇವತ್ತಿನ ವರೆಗೂ) ಇರುವದು ಇದಕ್ಕೆ ಕಾರಣ. ಮತ್ತೆ ೧೯೭೭ರ ರಾಷ್ಟ್ರೀಯ ಚುನಾವಣೆಯಲ್ಲಿ ಮತದಾರರಿಗೆ ಮತದಾನದೊಂದಿಗೆ ಯಾವ ಗೀತೆಯನ್ನು ರಾಷ್ಟ್ರಗೀತೆಯನ್ನಾಗಿ ಆರಿಸಿಕೊಳ್ಳುವ ಪ್ರಶ್ನೆಯನ್ನು ಮುಂದಿಡಲಾಗಿತ್ತು. ಅದರ ಫಲಿತಾಂಶ 'ಅಡ್ವಾನ್ಸ್ ಆಸ್ಟ್ರೇಲಿಯಾ ಫೇರ್' ಪರವಾಗಿದ್ದರೂ ಮತ್ತೆ ಏಳು ವರ್ಷಗಳ ನಂತರ ಅಂದರೆ ೧೯೮೪ರಲ್ಲಿ ಅಡ್ವಾನ್ಸ್ ಆಸ್ಟ್ರೇಲಿಯಾ ಫೇರ್ ಗೀತೆಯನ್ನು ರಾಷ್ಟ್ರಗೀತೆಯಾಗಿ ಅಂಗೀಕರಿಸಲಾಯಿತು. ಆದರೂ ಸಹಿತ ಗಾಡ್ ಸೇವ್ ಕ್ವೀನ್ ಗೀತೆಗೆ ರಾಯಲ್ ರಾಷ್ಟ್ರಗೀತೆ ಎನ್ನುವ ಪಟ್ಟಕೊಟ್ಟು ಬ್ರಿಟೀಶ ರಾಜಸತ್ತೆಯ ಜನರು ಆಷ್ಟ್ರೇಲಿಯಾಕೆ ಭೆಟ್ಟಿ ಕೊಟ್ಟ ಸಂದರ್ಭದಲ್ಲಿ ಮಾತ್ರ ಉಪಯೋಗಿಸಲಾಗುತ್ತದೆ.
ADVANCE
AUSTRALIA
FAIR
Australians
all let us rejoice,
For we are young and free;
We’ve golden soil and wealth for toil;
For we are young and free;
We’ve golden soil and wealth for toil;
Our home is girt by sea;
Our land abounds in nature’s gifts
Of beauty rich and rare;
In history’s page, let every stage
Advance Australia Fair.
Our land abounds in nature’s gifts
Of beauty rich and rare;
In history’s page, let every stage
Advance Australia Fair.
In
joyful strains then let us sing,
Advance Australia Fair.
Advance Australia Fair.
Beneath
our radiant Southern Cross
We’ll toil with hearts and hands;
To make this Commonwealth of ours
Renowned of all the lands;
For those who’ve come across the seas
We’ve boundless plains to share;
With courage let us all combine
To Advance Australia Fair.
We’ll toil with hearts and hands;
To make this Commonwealth of ours
Renowned of all the lands;
For those who’ve come across the seas
We’ve boundless plains to share;
With courage let us all combine
To Advance Australia Fair.
In
joyful strains then let us sing,
Advance Australia Fair
Advance Australia Fair
ಅಡ್ವಾನ್ಸ್ ಅಷ್ಟ್ರೇಲಿಯಾ ಫೇರ್
ಆಷ್ಟ್ರೇಲಿಯನ್ಸ್ ಆಲ್ ಲೆಟ್ ಆಸ್ ರೆಜೊಯ್ಸ್
ಫಾರ್ ವಿ ಆರ್ ಯಂಗ್ ಆಂಡ ಫ್ರೀ
ವಿ ಹ್ಯಾವ್ ಗೋಲ್ಡನ್ ಸೌಲ್ ಆಂಡ ವೆಲ್ಥ್ ಫಾರ್ ಟೌಲ್
ಅವರ್ ಹೋಮ್ ಈಸ್ ಗಿರ್ಟ್ ಭಾಯ್ ಸಿ
ಅವರ ಲ್ಯಾಂಡ್ ಅಬೌಂಡ್ಸ್ ಇನ್ ನೇಚರ್ಸ್ ಗಿಫ್ಟ್ಸ್
ಆಫ್ ಬ್ಯುಟಿ ರಿಚ್ ಆಂಡ ರೇರ್
ಇನ್ ಹಿಸ್ಟರಿ’ಸ್ ಪೇಜ್,ಲೆಟ್ ಎವೆರಿ ಸ್ಟೇಜ್
ಅಡ್ವಾನ್ಸ್ ಆಸ್ಟ್ರೇಲಿಯಾ ಫೇರ್
ಇನ್ ಜೊಯಪುಲ್ ಸ್ಟ್ರೈನ್ಸ್ ದೆನ್ ಲೆಟ್ ಆಸ್ ಸಿಂಗ್
ಅಡ್ವಾನ್ಸ್ ಆಸ್ಟ್ರೇಲಿಯಾ ಫೇರ್
ಬಿನೀತ್ ಅವರ್ ರೇಡಿಯಂಟ್ ಸೌಥರ್ನ್ ಕ್ರಾಸ್
ವಿ ವಿಲ್ ಟೌಲ್ ವಿತ್ ಹಾರ್ಟ್ಸ್ ಆಂಡ ಹ್ಯಾಂಡ್ಸ್
ಟು ಮೇಕ್ ದಿಸ್ ಕಾಮನ್‌ವೆಲ್ತ್ಸ್ ಆಫ್ ಅವರ್ಸ್
ರಿನೌನ್ ಆಫ್ ಆಲ್ ದ ಲ್ಯಾಂಡ್ಸ್
ಫಾರ್ ದೋಸ್ ಹೂ ಕಮ್ ಅಕ್ರಾಸ್ ದ್ ಸಿಸ್
ವಿ ಹ್ಯಾವ್ ಬೌಂಡಲೆಸ್ ಪ್ಲೇನ್ಸ್ ಟು ಶೇರ್
ವಿತ್ ಕರೇಜ್ ಲೆಟ್ ಅಸ್ ಆಲ್ ಕಂಬೈನ್
ಅಡ್ವಾನ್ಸ್ ಆಸ್ಟ್ರೇಲಿಯಾ ಫೇರ್
ಇನ್ ಜೊಯಪುಲ್ ಸ್ಟ್ರೈನ್ಸ್ ದೆನ್ ಲೆಟ್ ಆಸ್ ಸಿಂಗ್
ಅಡ್ವಾನ್ಸ್ ಆಸ್ಟ್ರೇಲಿಯಾ ಫೇರ್
ಅಡ್ವಾನ್ಸ್ ಆಸ್ಟ್ರೇಲಿಯಾ ಫೇರ್ ಕನ್ನಡ ಭಾವಾನುವಾದದ ಒಂದು ಪ್ರಯತ್ನ
ನಮ್ಮ ಅಷ್ಟ್ರೇಲಿಯಾ ಮುನ್ನಡೆಯಲಿ ಚೆನ್ನಾಗಿ
ನಾವೆಲ್ಲ ಆಷ್ಟ್ರೇಲಿಯನ್ನರು ಸಂಭ್ರಮಿಸೋಣ
ನಮ್ಮ ಈ ಹೊಸ ದೇಶದ ಯೌವನ ಮತ್ತು ಸ್ವಾತಂತ್ರ್ಯಕ್ಕಾಗಿ
ನಮಗಿರುವದು ಬಂಗಾರದಂತಹ ಭೂಮಿ ಮತ್ತು ದುಡಿಯಲು ಅಪರಿಮಿತ ಭಾಗ್ಯ
ನಮ್ಮ ತಾಯ್ನಾಡನ್ನು ಸುತ್ತುವರಿದಿದೆ ಸುಂದರವಾದ ಸಮುದ್ರ
ಹಾಗೂ ಒಳ ಭಾಗಗಳಲ್ಲಿ ತುಂಬಿಕೊಂಡಿವೆ ನಿಸರ್ಗದ ಖಣಿಗಳು ಸಮೃದ್ಧ
ಇತಿಹಾಸದ ಪುಟಗಳಲ್ಲಿ ಪ್ರತಿ ಹಂತಗಳಲ್ಲಿ
ನಮ್ಮ ಅಷ್ಟ್ರೇಲಿಯಾ ಮುನ್ನಡೆಯಲಿ ಚೆನ್ನಾಗಿ
ನಮ್ಮ ಸಂತಸದ ತೊಂದರೆಗಳ ನಡುವೆ ನಾವು ಹಾಡೋಣ
ನಮ್ಮ ದೇಶ ಮುನ್ನಡೆಯಲಿ ಚೆನ್ನಾಗಿ
ನಮ್ಮ ಸೌಥರ್ನ್ ಕ್ರಾಸ್‌ನ ಪ್ರಭೆಯ ಅಂಬರದ ಕೆಳಗೆ
ನಾವೆಲ್ಲ ಮನಸುಗಳೊಂದಿಗೆ ಕೈ-ಕೈ ಜೋಡಿಸಿ
ನಮ್ಮ ಈ ನಾಡನ್ನು ಪ್ರಸಿದ್ಧಗೊಳಿಸೋಣ.
ನಾವೆಲ್ಲ ಸಾಗರಗಳ ದಾಟಿ ಈ ನೆಲವ ಅಪ್ಪಿಕೊಂಡವರು
ಈ ನೆಲದೊಂದಿಗೆ ಅನಂತ ಸಾದ್ಯತೆಗಳನ್ನು ಒಬರಿಗೊಬ್ಬರು ಹಂಚಿಕೊಳ್ಳುವವರು.
ಎಲ್ಲರೂ ಒಟ್ಟಾಗಿ ಧೈರ್ಯದಿಂದ ಈ ದೇಶವ ಮುನ್ನಡೆಸೋಣ.
ನಮ್ಮ ಸಂತಸದ ತೊಂದರೆಗಳ ನಡುವೆ ನಾವು ಮತ್ತೆ ಹಾಡೋಣ
ನಮ್ಮ ದೇಶ ಮುನ್ನಡೆಯಲಿ ಚೆನ್ನಾಗಿ
ನಾವೆಲ್ಲ ಆಷ್ಟ್ರೇಲಿಯನ್ನರು ಸಂಭ್ರಮಿಸೋಣ
ನಮ್ಮ ಈ ಹೊಸ ದೇಶದ ಯೌವನ ಮತ್ತು ಸ್ವಾತಂತ್ರ್ಯಕ್ಕಾಗಿ
ನಮಗಿರುವದು ಬಂಗಾರದಂತಹ ಭೂಮಿ ಮತ್ತು ದುಡಿಯಲು ಅಪರಿಮಿತ ಭಾಗ್ಯ
ನಮ್ಮ ತಾಯ್ನಾಡನ್ನು ಸುತ್ತುವರಿದಿದೆ ಸುಂದರವಾದ ಸಮುದ್ರ
ಹಾಗೂ ಒಳ ಭಾಗಗಳಲ್ಲಿ ತುಂಬಿಕೊಂಡಿವೆ ನಿಸರ್ಗದ ಖಣಿಗಳು ಸಮೃದ್ಧ
ಇತಿಹಾಸದ ಪುಟಗಳಲ್ಲಿ ಪ್ರತಿ ಹಂತಗಳಲ್ಲಿ
ನಮ್ಮ ಅಷ್ಟ್ರೇಲಿಯಾ ಮುನ್ನಡೆಯಲಿ ಚೆನ್ನಾಗಿ
ನಮ್ಮ ಸಂತಸದ ತೊಂದರೆಗಳ ನಡುವೆ ನಾವು ಹಾಡೋಣ
ನಮ್ಮ ದೇಶ ಮುನ್ನಡೆಯಲಿ ಚೆನ್ನಾಗಿ
ನಮ್ಮ ಸೌಥರ್ನ್ ಕ್ರಾಸ್‌ನ ಪ್ರಭೆಯ ಅಂಬರದ ಕೆಳಗೆ
ನಾವೆಲ್ಲ ಮನಸುಗಳೊಂದಿಗೆ ಕೈ-ಕೈ ಜೋಡಿಸಿ
ನಮ್ಮ ಈ ನಾಡನ್ನು ಪ್ರಸಿದ್ಧಗೊಳಿಸೋಣ.
ನಾವೆಲ್ಲ ಸಾಗರಗಳ ದಾಟಿ ಈ ನೆಲವ ಅಪ್ಪಿಕೊಂಡವರು
ಈ ನೆಲದೊಂದಿಗೆ ಅನಂತ ಸಾದ್ಯತೆಗಳನ್ನು ಒಬರಿಗೊಬ್ಬರು ಹಂಚಿಕೊಳ್ಳುವವರು.
ಎಲ್ಲರೂ ಒಟ್ಟಾಗಿ ಧೈರ್ಯದಿಂದ ಈ ದೇಶವ ಮುನ್ನಡೆಸೋಣ.
ನಮ್ಮ ಸಂತಸದ ತೊಂದರೆಗಳ ನಡುವೆ ನಾವು ಮತ್ತೆ ಹಾಡೋಣ
ನಮ್ಮ ದೇಶ ಮುನ್ನಡೆಯಲಿ ಚೆನ್ನಾಗಿ