Sunday, 17 November 2013

ರಾಷ್ಟ್ರೀಯ ಹೂವಿನ ಗಿಡ- ಬಂಗಾರ ಬಣ್ಣದ ವಾಟ್ಟಲ್



ಅಕೇಸಿಯಾ ಪೈಕ್ನಂತಾ (Acacia pycnantha)ಎಂದು ವೈಜ್ಞಾನಿಕ ಹೆಸರು ಹೊತ್ತಿರುವ ಬಂಗಾರ ಬಣ್ಣದ ವಾಟ್ಟಲ್ ಅಧಿಕೃತವಾಗಿ  ಆಸ್ಟ್ರೇಲಿಯದ ರಾಷ್ಟ್ರೀಯ ಹೂವಿನ ಗಿಡ ಎಂದು ಅಂಗೀಕರಿಸಲ್ಪಟ್ಟಿದೆ. ವಾಟ್ಟಲ್ ಗಿಡಗಳು ಜಗತ್ತಿನ ಹಲವೆಡೆ ಬೆಳೆದರೂ ಆಷ್ಟ್ರೇಲಿಯಾದಲ್ಲಿ ಸಿಗುವಷ್ಟು ಬೇರೆ ಬೇರೆ ಪ್ರಭೇದಗಳು ಬೇರೆಲ್ಲೂ ಇಲ್ಲ ಅನಿಸುತ್ತದೆ. ದಿನಕ್ಕೆ ಮೂರು ತರನಾದ ವಾಟ್ಟಲ್ ಗಿಡಗಳಂತೆ ವರ್ಷಪೂರ್ತಿ ನೆಟ್ಟರೂ ಇಲ್ಲಿ ಸಿಗುವ ಎಲ್ಲಾ ತರನಾದ ವಾಟ್ಟಲ್‌ಗಳನ್ನು ನೆಡುವದಾಗುವದಿಲ್ಲ ಎನ್ನುವ ಮಾತು ಆಸ್ಟ್ರೇಲಿಯದಲ್ಲಿ ಚಲಾವಣೆಯಲ್ಲಿದೆ
. 

ಬಂಗಾರ ಬಣ್ಣದ ವಾಟ್ಟಲ್ ಗಿಡ.  ಕನ್ನಡದಲ್ಲಿ ಇದನ್ನು ಬಹುಶಃ ಸಂಕೇಶ್ವರ ಗಿಡ ಎಂದು ಕರೆಯುತ್ತಾರೆ. 
 



ಬಂಗಾರ ಬಣ್ಣದ ವಾಟ್ಟಲ್ ಗಿಡದಲ್ಲಿರುವ ಹಸಿರೆಲೆಗಳು ಮತ್ತು ಮೊಗ್ಗಿನಂತಹ ಹಳದಿ ಹೂವುಗಳು ತಮ್ಮ ಅತಿ ವಿಶಿಷ್ಟ ಬಣ್ಣಗಳಿಂದ ಕಣ್ಮನ ಸೆಳೆಯುತ್ತವೆ. ಈ ಹೂವಿನ ಗಿಡವನ್ನು ಆಸ್ಟ್ರೇಲಿಯದ ರಾಷ್ಟ್ರೀಯ ಲಾಂಛನ- ಕೋಟ್ ಆಫ್ ಆರ್ಮ್ಸ್‌ದಲ್ಲಿ ಬಳಸಲಾಗಿದೆ. ಅಷ್ಟೇ ಅಲ್ಲದೇ ಬಂಗಾರ ಬಣ್ಣದ ವಾಟ್ಟಲ್ ಇರುವ ಅಂಚೆ ಚೀಟಿಯನ್ನೂ ಸರಕಾರ ಬಿಡುಗಡೆ ಮಾಡಿದೆ.
 
 
ಬಂಗಾರ ಬಣ್ಣದ ವಾಟ್ಟಲ್ ಅನ್ನು ಸಂಕೇತಿಸುವ ಹಸಿರು ಹಾಗೂ ಹಳದಿ ಬಣ್ಣ ಗಳನ್ನು ಹೊಂದಿರುವ ಸಮವಸ್ತ್ರಗಳನ್ನು ಆಷ್ಟ್ರೇಲಿಯಾ ಕ್ರಿಕೆಟ್ ತಂಡವಲ್ಲದೇ ಇನ್ನೂ ಹಲವು ಒಲಂಪಿಕ್ ತಂಡಗಳು ಹೊಂದಿವೆ.
 
ಆಷ್ಟ್ರೇಲಿಯಾದ ಹಲವು ಊರುಗಳಲ್ಲಿವ ಓಣಿಗಳ ಹೆಸರುಗಳನ್ನು  ವಾಟ್ಟಲ್ ಸ್ಟ್ರೀಟ್ ಅಂತ ಕರೆದು ಆಯಾ ಊರುಗಳ  ಸ್ಥಳೀಯ ಆಡಳಿತ ಈ ರಾಷ್ಟ್ರೀಯ ಹೂವಿನ ಗಿಡಕ್ಕೆ ಗೌರವ ಸೂಚಿಸಿವೆ.

 
ಕ್ವೀನ್ಸ್ ಲ್ಯಾಂಡ್ ರಾಜ್ಯದ ಮಕಾಯ್ ಊರಿನಲ್ಲಿರುವ ಓಣಿಯ ನಾಮಪಕಲಕ
 

೧೯೮೮ ಸೆಪ್ಟೆಂಬರ್ ೧ರಂದು ಬಂಗಾರ ಬಣ್ಣದ ವಾಟ್ಟಲ್‌ನ್ನು ರಾಷ್ಟ್ರೀಯ ಹೂವಿನ ಗಿಡ ಎಂದು ಘೋಷಿಸಿದ ಸವಿ ನೆನಪಿಗಾಗಿ ಆ ದಿನವನ್ನು ವಾಟ್ಟಲ್ ದಿನವೆಂದು ಆಚರಿಸಲಾಗುತ್ತದೆ.
 


3 comments:

  1. ಮಾನ್ಯರೇ,
    ನೀವು ಚಿತ್ರದಲ್ಲಿ ಕೊಟ್ಟಿರುವುದು ಬಹುಶಃ ಇಂಗ್ಲೀಷಿನಲ್ಲಿ Copper Pod tree ಎಂದು ಕರೆಯಲ್ಪಡುವ ಗಿಡವಿರಬಹುದು. ಏಕೆಂದರೆ ಈ ಗಿಡದ ಕಾಯಿಗಳು ತಾಮ್ರದ ಬಣ್ಣ ಹೊಂದಿರುತ್ತವೆ. ಅಂದ ಹಾಗೆ, ಕನ್ನಡದಲ್ಲಿ ಸಂಕೇಶ್ವರ ಮರ ಎನ್ನುವುದು May Flower - Delonix regia ಗಿಡಕ್ಕೆ. ಉಳಿದಂತೆ ನಿಮ್ಮ ಮಾಹಿತಿಯುಕ್ತ ಬರಹಕ್ಕೆ ಧನ್ಯವಾದಗಳು.

    ReplyDelete
  2. ಮಾನ್ಯರೇ,
    ಈ ಹಿಂದೆ ತಿಳಿಸಿದ Copper Pod treeಯ ಸಸ್ಯ ಶಾಸ್ತ್ರೀಯ ಹೆಸರು Peltophorum pterocarpum - ನೀವು ತಿಳಿಸಿದ ಗಿಡವನ್ನು ಇದೇ ಇರಬಹುದೆಂದು ತಪ್ಪಾಗಿ ಅರ್ಥೈಸಿದ್ದೆ ಆ ತಪ್ಪು ಮಾಹಿತಿಗಾಗಿ ಕ್ಷಮೆಯಿರಲಿ.
    ವಂದನೆಗಳೊಂದಿಗೆ.

    ReplyDelete
  3. ಮಕರ ಅವರೇ , ತಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು. ತಾವು ಸೂಚಿಸಿದಂತೆ ಇದು ಕನ್ನಡದಲ್ಲಿ ಸಂಕೇಶ್ವರ ಗಿಡ ಎಂದು ಕರೆಯಲ್ಪಡುವ ಗಿಡ ಅಲ್ಲ ಎನಿಸುತ್ತದೆ. ಆದರೆ ಮೇಲೆ ಕೊಟ್ಟಿರುವ ಚಿತ್ರ ಮಾತ್ರ Acacia pycnantha ಎಂಬ ಸಸ್ಯ ಶಾಸ್ತೀಯ ಹೆಸರು ಹೊತ್ತಿರುವ ಗೋಲ್ಡನ್ ವಾಟ್ಟಲ್ ಗಿಡದ್ದೇ. ..ಲೇಖನದಲ್ಲೇ ತಿಳಿಸಿದಂತೆ ಇಲ್ಲಿ ಆಷ್ತ್ರೇಲಿಯಾದಲ್ಲಿ ಬೇರೆ ಬೇರೆ ತರನಾದ ವಾಟ್ಟಲ್ ಗಿಡಗಳು ಹೇರಳವಾಗಿ ಸಿಗುತ್ತವೆ. ಈ ಗಿಡಗಳಿಗೆ ಸಂಕೇಶ್ವರ ಗಿಡಗಳಂತೆ ಕಾಯಿಗಳಿರದಿದ್ದರೂ ಅದೇ ತರನಾದ phyllode ಎಂದು ಕರೆಯಲ್ಪಡುವ ಎಲೆಗಳಿಂದಾದ ದೇಟುಗಳು( ವಿವಿಧ ಅಳತೆಗಳಲ್ಲಿದ್ದು) ಜೋತು ಬಿದ್ದಿರುತ್ತವೆ. ಈ ಗಿಡಗಳಿಗೆ ಕನ್ನಡದ ಹೆಸರು ಗೊತ್ತಾದರೆ ತಿಳಿಸಬೇಕಾಗಿ ಕೋರಿಕೆ.

    ReplyDelete