ಆಷ್ಟ್ರೇಲಿಯಾದ ಈಗಿನ ಧ್ವಜ ಅನೇಕ ಬಾರಿ ಬದಲಾವಣೆಗೆ ಒಳಗಾಗಿದ್ದು, ಇದರ ಮೂಲ ಧ್ವಜ ವನ್ನು ಮೊದಲನೆ ಬಾರಿಗೆ ಮೆಲ್ಬರ್ನದಲ್ಲಿ ೧೯೦೧ ಸೆಪ್ಟೆಂಬರ್ ೩ರಂದು ಹಾರಿಸಲಾಯಿತು. ಆದರಿಂದ ಸೆಪ್ಟೆಂಬರ ೩ನ್ನು ರಾಷ್ಟ್ರೀಯ ಧ್ವಜ ದಿನವನ್ನಾಗಿ ಆಚರಿಸಲಾಗುತ್ತದೆ.
ಆಷ್ಟ್ರೇಲಿಯಾದ ಧ್ವಜದಲ್ಲಿ ಮೂರು ಮುಖ್ಯ ಲಾಂಛನಗಳನ್ನು ಉಪಯೋಗಿಸಲಾಗಿದ್ದು ಅವು ಇಂತಿವೆ. ೧.ಯುನಿಯನ್ ಜಾಕ್ ಧ್ವಜ, ೨.ಕಾಮನ್‌ವೆಲ್ಥ್ ನಕ್ಷತ್ರ ಮತ್ತು ೩.ಸೌಥೆರ್ನ್ ಕ್ರಾಸ ನಕ್ಷತ್ರ ಪುಂಜ.
೧.ಯುನಿಯನ್ ಜಾಕ್ ಧ್ವಜ,
ಯುನಿಯನ ಜಾಕ್ ಧ್ವಜ ನಿಜವಾಗಿಯೂ ಬ್ರಿಟನ್‌ದ ಧ್ವಜವಾಗಿದ್ದು ಆಷ್ಟ್ರೇಲಿಯದ ಧ್ವಜದಲ್ಲಿ ಅದನ್ನು ಉಪಯೋಗಿಸುವದು ಎಷ್ಟರ ಮಟ್ಟಿಗೆ ಸರಿಎನ್ನುವದು ಯಕ್ಷ ಪ್ರಶ್ನೆಯಾಗಿದೆ.
ಯುನಿಯನ್ ಧ್ವಜವೂ ಮೂರು ಅಂಶಗಳನ್ನು ಒಳಗೊಂಡಿದ್ದು ಅದರಲ್ಲಿ ಬರುವ ಅಡ್ಡ , ಲಂಬ ಮತ್ತು ಮೂಲೆಯ ಪಟ್ಟಿಗಳು ಬ್ರಿಟನ್‌ದ ಮೂರು ಪ್ರಾಂತಗಳನ್ನು ಪ್ರತಿನಿಧಿಸುತ್ತವೆ. ಕೆಂಪು ಅಡ್ಡ ಪಟ್ಟಿ ಇಂಗ್ಲೆಂಡ್‌ನ ಸಂತ ಜಾರ್ಜ್‌ನ ಕ್ರಾಸ್‌ನ್ನೂ, ಮೂಲೆಯಿಂದ ಮೂಲೆಗಿರುವ ಬಿಳಿ ಪಟ್ಟಿ ಸ್ಕಾಟ್‌ಲ್ಯಾಂಡ್‌ನ ಸಂತ ಆಂಡ್ರು ಕ್ರಾಸ್‌ನ್ನೂ, ಹಾಗೆಯೇ ಇನ್ನೊಂದು ಮೂಲೆಯ ಕೆಂಪು ಪಟ್ಟಿ ಐರ್ಲೆಂಡಿನ ಸಂತ ಪ್ಯಾಟ್ರಿಕ್ ಕ್ರಾಸ್‌ನ್ನೂ ಪ್ರತಿನಿಧಿಸುತ್ತವೆ. ಹೀಗೆ ಈ ಬ್ರಿಟೀಷರ ಯುನಿಯನ ಜಾಕ್ ಧ್ವಜವನ್ನು ಆಷ್ಟ್ರೇಲಿಯ ತನ್ನ ಧ್ವಜದ ಒಂದು ಭಾಗವಾಗಿ ಉಪಯೋಗಿಸುವದು ತನ್ನ ಮೇಲೆ ಬ್ರಿಟೀಷ ಅಧಿಪತ್ಯವನ್ನು ಒಪ್ಪಿಕೊಂಡಿರುವದನ್ನು ತೋರಿಸಿದರೂ ಇದಕ್ಕೆ ಹಲವರ ವಿರೋಧವೂ ಇದೆ.
೨. ಕಾಮನ್‌ವೆಲ್ಥ್ ನಕ್ಷತ್ರ
ಧ್ವಜದಲ್ಲಿ ಯುನಿಯನ ಜಾಕ್‌ನ ಕೆಳ ಭಾಗದಲ್ಲಿರುವ ಈ ನಕ್ಷತ್ರ ಏಳು ಮೂಲೆಬಿಂದುಗಳನ್ನು ಹೊಂದಿದ್ದು ಆಷ್ಟ್ರೇಲಿಯಾದ ಆರು ರಾಜ್ಯಗಳೊಂದಿಗೆ ಇನ್ನುಳಿದ ದ್ವೀಪ ಪ್ರಾಂತಗಳನ್ನು ಪ್ರತಿನಿಧಿಸುತ್ತದೆ.
೩.ಸೌಥೆರ್ನ್ ಕ್ರಾಸ ನಕ್ಷತ್ರ ಪುಂಜ.
ಸೌಥೆರ್ನ್ ಕ್ರಾಸ ನಕ್ಷತ್ರ ಪುಂಜ(ಐದು ನಕ್ಷತ್ರಗಳು) ಧ್ವಜದ ಬಲಭಾಗದಲ್ಲಿದ್ದು ಇದು ದಕ್ಷಿಣ ಭೂಗೋಲದಿಂದ ಕಾಣಲ್ಪಡುವ ಒಂದು ಆಕಾಶ ನಕ್ಷತ್ರ ಪುಂಜ. ಇದನ್ನು ನಮ್ಮ ಭಾರತೀಯ ಖಗೋಲ ಶಾಶ್ತ್ರದ ಪ್ರಕಾರ ಇದನ್ನು ತ್ರಿಶಂಕು ನಕ್ಷತ್ರ ಪುಂಜ ಎಂದು ಕರೆಯಲಾಗುತ್ತದೆ.
ಯುರೋಪಿನಲ್ಲಿ ಆಷ್ಟ್ರೇಲಿಯದ ದಾರಿಯನ್ನು ಕಂಡು ಹಿಡಿದ ಮೇಲೆ ಈ ನಕ್ಷತ್ರ ಪುಂಜದಬಗ್ಗೆ ಬಹಳ ಚರ್ಚೆಗಳಾಗುತ್ತಿದ್ದವು. ಹೀಗಾಗಿ ಈ ನಕ್ಷತ್ರ ಪುಂಜಕ್ಕೂ ಆಷ್ಟ್ರೇಲಿಯಾಕ್ಕೂ ಒಂದು ಅವಿನಾಭಾವ ಸಂಭಂದವನ್ನು ಕಲ್ಪಿಸಿ ಇದನ್ನು ಧ್ವಜದಲ್ಲಿ ಬಳಸಿಕೊಳ್ಳಲಾಯಿತು.
೧೯೦೧ರಲ್ಲಿ ಆಷ್ಟ್ರೇಲಿಯ ಒಂದು ಸ್ವತಂತ್ರ ದೇಶವೆಂದು ಘೋಷಣೆಯಾದಾಗ ಅದರ ಧ್ವಜವನ್ನು ನಿರ್ಧರಿಸುವದಕ್ಕಾಗಿ ಹಲವು ಸ್ಪರ್ದೆಗಳನ್ನು ಏರ್ಪಡಿಸಲಾಗಿತ್ತು. ಆದರೆ ಈ ಸ್ಪರ್ದೆಯಲ್ಲಿ ಧ್ವಜವನ್ನು ವಿನ್ಯಾಸ ಮಾಡುವಾಗ ಭ್ರಿಟನ್‌ದ ಯುನಿಯನ್ ಜಾಕ್ ಮತ್ತು ಸೌಥೆರ್ನ್ ಕ್ರಾಸ ನಕ್ಷತ್ರ ಪುಂಜವನ್ನು ಕಡ್ಡಾಯವಾಗಿ ಬಳಸಬೇಕೆಂಬುದು ನಿಯಮವಾಗಿತ್ತು. ಆವಗಿನಿಂದ ಇನ್ನೂತನಕ ಬ್ರಿಟೀಷ ಸಾಮ್ರಾಜ್ಯಶಾಹಿಯ ಭಾಗವಾಗಿಯೆ ಇರುವ ಆಷ್ಟ್ರೇಲಿಯಾದ ಧ್ವಜದಲ್ಲಿ ಇವುಗಳನ್ನು ಬಳಸಬೇಕೆನ್ನುವ ಈ ನಿಯಮ ಆವಾಗ ಅಸಹಜವಾಗೇನು ತೋರಿರಲ್ಲವಾದರೂ ಸ್ವಲ್ಪ ಜನರಿಗೆ ಇದು ಸರಿಯೆನಿಸಲಿಲ್ಲ. ಆವಾಗ ಈ ವಿಷಯವಾಗಿ ಸ್ವಲ್ಪ ಚರ್ಚೆ ನಡೆದರೂ ಕೊನೆಗೆ ಈ ಲಾಂಛನಗಳನ್ನು ಬಳಸಿಯೇ ವಿನ್ಯಾಸ ಮಾಡಬೇಕೆಂದು ನಿರ್ದರಿಸಲಾಯಿತು. ಸರಕಾರದ ವತಿಯಿಂದ ನಡೆಯಲಾದ ಸ್ಪರ್ದೆಯಲ್ಲಿ ಸುಮಾರು ೩೨೮೨೩ ವಿನ್ಯಾಸಗಳು ಸ್ಪರ್ದಿಸಿದ್ದು ಅದರಲ್ಲಿ ಐದು ಜನರ ವಿನ್ಯಾಸಗಳನ್ನು ಒಂದುಗೂಡಿಸಿ ಆಷ್ಟ್ರೇಲಿಯಾದ ಧ್ವಜವನ್ನು ನಿರ್ಧರಿಸಲಾಯಿತು.
ಧ್ವಜದಲ್ಲಿ ಬದಲಾವಣೆಗೆ ಒತ್ತಾಯ.
ಆಷ್ಟ್ರೇಲಿಯಾದ ಧ್ವಜದಲ್ಲಿ ಬ್ರಿಟೀಷ ಯುನಿಯನ್ ಜಾಕ್ ದ್ವಜ ಇರುವದನ್ನು ಅವಾಗಾವಾಗ ಬಹಳಷ್ಟು ಜನ ವಿರೊಧಿಸುತ್ತಲೇ ಬಂದಿರುವದರಿಂದ ಇದರ ಬಗ್ಗೆ ಬಹಳ ಸಲ ಚರ್ಚೆಯಾಗುತ್ತಿರುತ್ತದೆ. ಅದರಲ್ಲೂ ೧೯೮೮ರಲ್ಲಿ ಆಷ್ಟ್ರೇಲಿಯಾದ ದ್ವಿಶತಮಾನೋತ್ಸವದ ಸಂದರ್ಭದಲ್ಲಿ ಆಗಿನ ಪ್ರಧಾನ ಮಂತ್ರಿ ಪೌಲ್ ಕೀಟಿಂಗ್ ಅವರು ಧ್ವಜದ ಬದಲಾವಣೆಗೆ ಒತ್ತಾಯಿಸಿ 'ನಮ್ಮ ದೇಶದ ಧ್ವಜದಲ್ಲಿ ಇನ್ನೊಂದು ದೇಶದ ಧ್ವಜವನ್ನು ಬಳಸುವ ತನಕ ನಮ್ಮ ಸ್ವಾತಂತ್ರ್ಯ ಮತ್ತು ಸಾರ್ವಭೌಮತೆ ಪೂರ್ಣವಾಗುವದಿಲ್ಲ’ ಎಂದು ಹೇಳಿದ್ದು ಬಹಳ ಜನರ ಅಭಿಪ್ರಾಯವಾಗಿದೆ. ಆಸ್‌ಫ್ಲ್ಯಾಗ ಎನ್ನುವ ಸಂಸ್ಥೆ ಧ್ವಜದ ಬದಲಾವಣೆಗೆ ಒತ್ತಾಯಿಸುವಲ್ಲಿ ಮುಂಚೂಣಿಯಲ್ಲಿದ್ದರೆ ಹಾಗೆಯೇ ಆಷ್ಟ್ರೇಲಿಯನ್ ನ್ಯಾಶನಲ್ ಫ್ಲ್ಯಾಗ ಸಂಸ್ಥೆ ಬದಲಾವಣೆಯನ್ನು ವಿರೋಧಿಸುತ್ತದೆ.
ಆಸಕ್ತಿಕರ ಮಾಹಿತಿಗೆ ಧನ್ಯವಾದಗಳು, ಶಿಲ್ಪಾ ಅವರೆ.
ReplyDelete